Karnataka Irrigation Minister and MLA from Melukote C S Puttaraju open challenge to Karnataka BJP unit. Speaking in JDS office in Udupi, we seven MLAs from Mandya, is not only representatives but we are body guard of CM Kumaraswamy.
ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾದಿ ಆಗಿ ಎಲ್ಲರೂ ಸರಕಾರದ ಅಸ್ಥಿರತೆಯ ಬಗ್ಗೆ ಮಾತನಾಡುವವರೇ, ಬೆಂಕಿಯಿಲ್ಲದೇ ಹೊಗೆಯಾಡಲು ಸಾಧ್ಯವೇ? ಆದರೆ, ಎಲ್ಲವೂ ಆಗುತ್ತಿರುವುದು ಮಾಧ್ಯಮಗಳಿಂದ ಎಂದು ಗೂಬೆ ಕೂರಿಸುವುದು ಮಾತ್ರ ಮಿಡಿಯಾಗಳ ಮೇಲೆ. ಸಮ್ಮಿಶ್ರ ಸರಕಾರದಲ್ಲಿ ತಾನು ಬಯಸಿದ ಖಾತೆ ಸಿಗಲಿಲ್ಲ ಎಂದು ದೇವೇಗೌಡರ ಕರೆಗೂ ನಾಟ್ ರೀಚೇಬಲ್ ಆಗಿದ್ದ ಸಣ್ಣ ನೀರಾವರಿ ಖಾತೆಯ ಸಚಿವ ಸಿ ಎಸ್ ಪುಟ್ಟರಾಜು, ಕೇಸರಿ ಬೆಲ್ಟ್ ಉಡುಪಿಯಲ್ಲಿ ಬಿಜೆಪಿ ವಿರುದ್ದ ಅಕ್ಷರಸಃ ವಾಗ್ದಾಳಿ ನಡೆಸಿದ್ದಾರೆ.